Wednesday, December 23, 2015

ಕಾಣದ ಕಡಲಿಗೆ ಹಂಬಲಿಸಿದೆ ಮನ.................



ವಿದ್ಯಾರ್ಥಿ ಜೀವನ ಮುಗಿದು ಕೆಲಸಕ್ಕಾಗಿ ಅಲೆಯುತ್ತಿದ್ದ ಅತ್ಯಂತ ದುರ್ಬರವಾದ ದಿನಗಳಲ್ಲಿ ಮೊತ್ತ ಮೊದಲ ಬಾರಿಗೆ ನಾನು ಜಿ.ಎಸ್.ಎಸ್ ರವರ "ಕಾಣದ ಕಡಲಿಗೆ ಹಂಬಲಿಸಿದೆ ಮನ" ಎಂಬ ಈ ಕವನವನ್ನು ಅಶ್ವಥ್ ರವರ ಸಿರಿಕಂಠದಲ್ಲಿ ಕೇಳಿದ್ದೆ. ಒಂದೇ ಸಲಕ್ಕೆ ಮನಸ್ಸನ್ನು ಹೊಕ್ಕ ಈ ಗೀತೆ ಇಂದಿಗೂ ಕೂಡಾ ನಾನು ಇಷ್ಟಪಟ್ಟು ಕೇಳುವ ಕೆಲವೇ ಗೀತೆಗಳಲ್ಲಿ ಒಂದು. ನನ್ನ ನಿರುದ್ಯೋಗದ ದಿನಗಳಲ್ಲಿ, ರೋಗ ಪೀಡಿತನಾಗಿ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ, ವೈವಾಹಿಕ ಬದುಕಿನ ಏಳು ಬೀಳುಗಳಲ್ಲಿ, ಹರ್ಷದ ದಿನಗಳಲ್ಲಿ....... ನಾನಾ ಅರ್ಥಗಳನ್ನು ಹೊಮ್ಮಿಸುತ್ತಾ ನನ್ನೊಳಗೆ ನಿರಂತರವಾಗಿ ಹರಿಯುತ್ತಿರುವ ಈ ಗೀತೆಯನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಂಡಿದ್ದೇನೆ.


ಕಾಣದ ಕಡಲಿಗೆ ಹಂಬಲಿಸಿದೆ ಮನ


ಕಾಣಬಲ್ಲೆನೆ ಒಂದು ದಿನ ಕಡಲೊಳು


ಕೂಡಬಲ್ಲೆನೆ ಒಂದು ದಿನ || ಕಾಣದ ||




ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ


ನನ್ನ ಕಲ್ಪನೆಯು ತನ್ನ ಕಡಲನೆ ಛಿದ್ರಿಸಿ ಚಿಂತಿಸಿ ಸುರಿಯುತಿದೆ


ಎಲ್ಲಿರುವುದೋ ಅದು ಎಂತಿರುವುದೋ ಅದು


ನೋಡಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ || ಕಾಣದ ||




ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ


ಸುನಿಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ


ಮುನ್ನೀರಂತೆ ಅಪಾರವಂತೆ


ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ || ಕಾಣದ ||




ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು


ಎಂದಿಗಾದರೂ ಕಾಣದ ಕಡಲಿಗೆ ಸೇರಬಲ್ಲೆ ನೀನು


ಸೇರಬಹುದೇ ನಾನು ಕಡಲ ನೀಲಿಯೊಳು ಕರಗಬಹುದೇ ನಾನು || ಕಾಣದ ||

No comments:

Post a Comment